ಜ಼ೂಮ್ 2016 ರಲ್ಲಿ ತೆರೆಕಂಡ ಭಾರತೀಯ ಕನ್ನಡ ಭಾ‍ಷೆಯ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದೆ. ಚಿತ್ರವನ್ನು ಪ್ರಶಾಂತ್ ರಾಜ್ ನಿರ್ದೇಶನ ಮಾಡಿದ್ದು, ಗಣೇಶ್ ಮತ್ತು ರಾಧಿಕಾ ಪಂಡಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ ಸಾಧು ಕೋಕಿಲ ಮತ್ತು ಕಾಶಿನಾಥ್ ಕಾಣಿಸಿಕೊಂಡಿದ್ದಾರೆ. ಎಸ್. ತಮನ್ ಸಂಗೀತ ಸಂಯೋಜಿಸಿದ್ದು, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವು 1 ಜುಲೈ 2016 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು . ಈ ಚಿತ್ರವು 1961 ರ ಲವರ್ ಕಮ್ ಬ್ಯಾಕ್ ಚಿತ್ರದ ರಿಮೇಕ್ ಆಗಿದೆ . ನಿರ್ದೇಶಕರು 2023 ರಲ್ಲಿ ತಮಿಳಿನಲ್ಲಿ ಕಿಕ್ ಎಂದು ಚಿತ್ರವನ್ನು ರಿಮೇಕ್ ಮಾಡಿದರು . == ಕಲಾವಿದರು == ಮುಖ್ಯ ಪಾತ್ರದಲ್ಲಿ ಗಣೇಶ್: ಸಂತೋಶ್ ಪಾತ್ರದಲ್ಲಿ. ರಾಧಿಕಾ ಪಂಡಿತ್ : ನಯನ ಪಾತ್ರದಲ್ಲಿ. ಇತರೆ ಸಾಧು ಕೋಕಿಲ: ಎಮ್. ಜಾನಕಿರಾಮ್ ಆಲಿಯಾಸ್ ಎಮ್‌ಜೆ ಪಾತ್ರದಲ್ಲಿ. ಕಾಶಿನಾಥ್: ಧೂಮಕೇತು ಪಾತ್ರದಲ್ಲಿ ಶ್ರೀನಿವಾಸ ಪ್ರಭು: ಆರ್.ಎನ್. ಸುದರ್ಶನ್ ಕಾವ್ಯ ಶೆಟ್ಟಿ ಎಮ್.ಎಸ್. ಉಮೇಶ್ ರವಿಶಂಕರ್ ಗೌಡ: ಕ್ಯಾಸೀಂ ಬ್ಯಾಂಕ್ ಜನಾರ್ಧನ್ == ಉಲ್ಲೇಖಗಳು == == ಬಾಹ್ಯಕೊಂಡಿಗಳು == ಜ಼ೂಮ್ @ ಐ ಎಮ್ ಡಿ ಬಿ